‘ಚಂದ್ರಿಕ ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ ಪೂರ್ಣ
Posted date: 10 Wed, Dec 2014 – 11:24:39 AM

ಫ಼್ಲೈಯಿಂಗ್ ವೀಲ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಆಶಾ ಅವರು ನಿರ್ಮಿಸುತ್ತಿರುವ ‘ಚಂದ್ರಿಕ ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಹೈದರಾಬಾದ್‌ನಲ್ಲಿ ಚಿತ್ರೀಕರಣವಾಗಿದೆ. ಕೊನೆಯ ಹಂತದ ಚಿತ್ರೀಕರಣ ಡಿಸಂಬರ್ ೯ರಿಂದ ಆರಂಭವಾಗಲಿದೆ.
 ಜೆ.ಕೆ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಕಾಮನ ಜೇಠ್ಮಾಲನಿ, ಶ್ರೀಮುಖಿ, ಗಿರೀಶ್ ಕಾರ್ನಾಡ್, ಎಲ್.ಬಿ.ಶ್ರೀರಾಂ, ಚಿಕ್ಕಣ್ಣ, ರಮೇಶ್(ತೆಲುಗು) ಮುಂತಾದವರಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಯೋಗೀಶ್ ಮುನಿಸಿದ್ದಪ್ಪ ನಿರ್ದೇಶಿಸುತ್ತಿದ್ದಾರೆ. ಕವಿರಾಜ್, ಕರುಣಾಕರ್, ರಘುಶಾಸ್ತ್ರಿ ಅವರು ಬರೆದಿರುವ ಹಾಡುಗಳಿಗೆ ಗುಣವಂತ್ ಸಂಗೀತ ನೀಡುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ಸುರೇಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ನಾಗು ಕಲಾ ನಿರ್ದೇಶನ ಹಾಗೂ ವೇಣುಪಾಲ್, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಶ್ವರರಾವ್ ‘ಚಂದ್ರಿಕ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed